ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಜೇಶ್ವರ: ಕಣ್ಣೂರಿಗೆ ಸಾಗಿಸಲಾಗುತ್ತಿದ್ದ ಎರಡು ಲಾರಿ ಮರಳು ವಶ

ಮಂಜೇಶ್ವರ: ಕಣ್ಣೂರಿಗೆ ಸಾಗಿಸಲಾಗುತ್ತಿದ್ದ ಎರಡು ಲಾರಿ ಮರಳು ವಶ

Sat, 06 Feb 2010 15:10:00  Office Staff   S.O. News Service
ಮಂಜೇಶ್ವರ  ಫೆಬ್ರವರಿ ೬: ಮಂಗಳೂರಿನಿಂದ ಕಣ್ಣೂರಿಗೆ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಎರಡು ಲಾರಿ ಮರಳನ್ನು  ಇಂದು ಕುಂಬಳೆ ಸಬ್ ಇನ್ಸಪೆಕ್ಟರ್ ರಾಜೀವ್ ಕುಮಾರ್ ನೇತೃತ್ವದ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕರಾದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಲಪ್ಪುರಂ ನಿಲಂಬೂರಿನ ಇಜೆ.ರಹೀಂ(೪೫) ಗಣೇಶನ್(೪೦) ಎಂದು ಗುರುತಿಸಲಾಗಿದೆ. 


ಮಧ್ಯಪಾನಗೈದು ಬೈಕ್ ಚಲಾಯಿಸುತ್ತಿದ್ದ ಒರ್ವನ ಸೆರೆ

ಮಂಜೇಶ್ವರ: ಮಧ್ಯಪಾನಗೈದು ಬೈಕ್ ಚಲಾಯಿಸುತ್ತಿದ್ದ ಒರ್ವನನ್ನು ಕುಂಬಳೆ ಪೋಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕುಂಬಳೆಯ ನಾಯ್ಕಾಪಿನ ಅಶೋಕ್(೪೦) ಎಂದು ತಿಳಿದು ಬಂದಿದೆ. ಈತ ಬದಿಯಡ್ಕ ರಸ್ತೆಯಾಗಿ ಪಾನಮತ್ತನಾಗಿ ಬೈಕ್ ಚಲಾಯಿಸಿದ್ದು ಪೋಲೀಸ್ ತಪಾಸಣೆ ಸಂದರ್ಭ ಪೋಲೀಸರು ಬಂಧಿಸಿದ್ದು .ಈತನಿಂದ ಬೈಕನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.


ಕುಂಜತ್ತೂರಿನಲ್ಲಿ ಸುನ್ನೀ ಆಶಯ ವಿಶದೀಕರಣ ಸಮ್ಮೇಳನ 

ಮಂಜೇಶ್ವರ:ಎಸ್.ಕೆ.ಎಸ್.ಎಸ್.ಎಫ್ ಮಂಜೇಶ್ವರ ವಲಯ ಸಮಿತಿ ಆಶ್ರಯದಲ್ಲಿ ಸುನ್ನೀ ಆಶಯ ವಿಶದೀಕರಣ ಸಮ್ಮೇಳನವು ಫೆಬ್ರವರಿ ೧೦ ರಂದು ಬುಧವಾರ ಸಂಜೆ ೪.೩೦ ರಿಂದ ರಾತ್ರಿ ೧೦ ಘಂಟೆ ತನಕ ಕುಂಜತ್ತೂರಿನಲ್ಲಿ ನಡೆಯಲಿದೆ. ಮುಸ್ತಫಾ ಅಶ್ರಫಿ ಕಕ್ಕುಪಡಿ ಕ್ಲಿಪ್ಪಿಂಗ್ ಸಹಿತ ಭಾಷಣ ಮಾಡಲಿರುವರು ಹಾಘು ಸಮಸ್ತದ ನೇತಾರರು ಸಮ್ಮೇಳನದಲ್ಲಿ ಭಾಗವಹಿಲಿರುವರೆಂದು ಪ್ರಕಟನೆ ತಿಳಿಸಿದೆ.

-ಆರಿಫ್ ಮಚ್ಚಂಪಾಡಿ, ಮಂಜೇಶ್ವರ 

Share: